ಪೇವೊ
	ದಕ್ಷಿಣಾಕಾಶದ ನಕ್ಷತ್ರಪುಂಜಗಳ ಪೈಕಿ ಒಂದು. ಇದನ್ನು ನವಿಲು (ದಿ ಪೀಕಾಕ್) ಎಂದೂ ಹೇಳುವುದುಂಟು. ಏರ ಮತ್ತು ಇಂಡಸ್ ನಕ್ಷತ್ರ ಪುಂಜಗಳ ನಡುವೆ ಇದೆ. ಸನ್ನಿಹಿತ ವಿಷುವದಂಶ 20 ಗಂಟೆ ; ಘಂಟಾವೃತ್ತಾಂಶ - 650 ದಕ್ಷಿಣ. ಈ ಪುಂಜದಲ್ಲಿ ನಾಲ್ಕನೆಯ ಕಾಂತಿವರ್ಗಕ್ಕೆ ಸೇರಿದ ಹಲವಾರು ನಕ್ಷತ್ರಗಳಿವೆ. α- ಪೇವೋನಿಸ್ ಎಂಬುದು ಎರಡನೆಯ ಕಾಂತಿವರ್ಗಕ್ಕೆ ಸೇರಿದೆ. ಪುಂಜದ ವಾಯುವ್ಯ ಮೂಲೆಯಲ್ಲಿದೆ. ಇದರ ವಿಷುವದಂಶ 20 ಗಂ. 23 ಮಿ ; ಘಂಟಾ ವೃತ್ತಾಂಶ - 56051' ದಕ್ಷಿಣ. ಭೂಮಿಯಿಂದ 310 ಬೆಳಕು ವರ್ಷಗಳ ದೂರದಲ್ಲಿದೆ. ಈ ಪುಂಜಕ್ಕೆ ಬೇಯರ್ ಎಂಬವ ಪೇವೋ ಎಂದು ಹೆಸರಿಟ್ಟ (1603). ಇದರಲ್ಲಿ ಮಸಕು ಕಾಂತಿಯ ಕೆಲವು ((.(.()ಯಮಳ ನಕ್ಷತ್ರಗಳಿವೆ. ಓಉಅ 6752 ಎಂಬುದು ಈ ಪುಂಜದ ಒಂದು ಗಮನಾರ್ಹ ಸದಸ್ಯ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ